Sunday, September 27, 2020

ವಿದ್ಯಾಗಮ-೧೦. AK

 ದಿನಾಂಕ: ೨೪-೯-೨೦೨೦

ಶಿಕ್ಷಕರ ಹೆಸರು: ಅಂಬುಜಾಕ್ಷಿ ಕೆ

ಸ್ಥಳ: ಅಣಗಳ್ಳಿ ಜನವಸತಿ ಪ್ರದೇಶ



ಈ ದಿನ ೩೨ ವಿದ್ಯಾರ್ಥಿಗಳಲ್ಲಿ ೩೦ ವಿದ್ಯಾರ್ಥಿಗಳು ಹಾಜರಿದ್ದರು. ಈ ಹಿಂದೆ ನೀಡಿದ್ದ ಚಟುವಟಿಕೆ ಗಳನ್ನು ಪೂರ್ಣಗೊಳಿಸಿ ಹಿಂತಿರುಗಿ ಸಿದರು. ಇತರ ವಿಷಯಗಳ ಚಟುವಟಿಕೆಗಳನ್ನು ನೀಡಿ ಸಲಹೆ ಸೂಚನೆಗಳನ್ನು ನೀಡಲಾಯಿತು. ೮ ಮತ್ತು ೯ ನೆ ತರಗತಿಯ ವರು ನೋಟ್ಸ್ ಗಳನ್ನು ಪರಿಶೀಲಿಸಿ ಕೊಂಡರು.

ಈ ದಿನ ಐಟಿ ರಸಪ್ರಶ್ನೆ ಏರ್ಪಡಿಸಲಾಯಿತು.






Tuesday, September 22, 2020

ವಿದ್ಯಾಗಮ- ೯ AK

 ಅನಗಳ್ಳಿ ಜನವಸತಿ ಪ್ರದೇಶ

ದಿನಾಂಕ ೨೨-೦೯-೨೦೨೦ ಈ ದಿನ ೩೨ ವಿದ್ಯಾರ್ಥಿಗಳಲ್ಲಿ ೩೦ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ರೂಪಣಾತ್ಮಕ ೧ ಕ್ಕೆ ಸಂಬಂಧಿಸಿದ ಪಾಠಗಳ ಅಭ್ಯಾಸ ಪ್ರಶ್ನೆಗಳಿಗೆ ಉತ್ತರ ಬರೆದಿರುವುದನ್ನು ನೋಡಲಾಯಿತು. ಹಾಗು ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು ಸಹಾಯ ಮಾಡುವಂತೆ ಸೂಚಿಸಲಾಯುತು.

ಇಂದು ಅಪೌಷ್ಟಿಕತೆಯ ನಿವಾರಣೆ ಯಲ್ಲಿ ಸಮತೋಲನ ಆಹಾರದ ಪದಾರ್ಥಗಳ ಪಾತ್ರದ ಕುರಿತು ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

೧೦ ನೆ ತರಗತಿಯ ಮಕ್ಕಳಿಗೆ ರೂಪಣಾತ್ಮಕ ೧ ರ ಚಟುವಟಿಕೆ ಯನ್ನು ನೀಡಲಾಯಿತು. ಸಲಹೆಯನ್ನು ನೀಡಲಾಯಿತು.






Monday, September 21, 2020

ವಿದ್ಯಾಗಮ - 9 ವಿಜಯಸಿಂಹನ್ ಎಂ ಎನ್( MNV)

 ದಿನಾಂಕ 21-09-2020 ರ ವಿದ್ಯಾಗಮ ಭೇಟಿಯಲ್ಲಿ ಹೆಚ್ಚಿನ ಕಾರ್ಯ ಚಟುಚಟಿಕೆಗಳು ನಡೆದಿರುತ್ತದೆ. ಈ ದಿನ ಒಂದು ಪ್ರಬಂಧ ಸ್ಪರ್ಧೆ ಮತ್ತು ಪೋಷಕ ಅಭಿಯಾನದ ಪ್ರಯುಕ್ತ ಭಿತ್ತಿಚಿತ್ರ ಅನಾವರಣ ಮತ್ತು ವಿದ್ಯಾರ್ಥಿಗಳಿಂದ ಭಾಷಣ ಏರ್ಪಡಿಸಲಾಗಿತ್ತು . ವಿವರವಾದ ವರದಿಗಾಗಿ ಇಲ್ಲಿ click ಮಾಡಿ ವಿದ್ಯಾಗಮ ವರದಿ-9

ವಿದ್ಯಾಗಮ - 8 MNV

 ದಿನಾಂಕ 18-09-2020 ರಂದು ವಿದ್ಯಾಗಮ ಭೇಟಿ ವಿವರವಾದ ವರದಿಗಾಗಿ click hear ವಿದ್ಯಾಗಮ -8 ವರದಿ

Sunday, September 20, 2020

ವಿದ್ಯಾಗಮ- 8 AK

ವಿದ್ಯಾಗಮ- 8

ದಿನಾಂಕ 18-09-2020 ರಂದು ಅನಗಳ್ಳಿ ಜನವಸತಿ ಪ್ರದೇಶದ ಭೇಟಿ. ಈದಿನ 32 ವಿದ್ಯಾರ್ಥಿಗಳಿಗೆ 29 ವಿದ್ಯಾರ್ಥಿಗಳು ಹಾಜರಿದ್ದರು. ಈ ಹಿಂದೆ ನೀಡಿದ್ದ ಎಲ್ಲಾ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಫೋನ್ ಮುಖಾಂತರ ವಿಷಯ ಶಿಕ್ಷಕರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು. 10 ನೆ ತರಗತಿಯವರು ರೂಪಣಾತ್ಮಕ 1 ರ ಪಾಠಗಳನ್ನು ಗುರುತಿಸಿಕೊಂಡು ಅಭ್ಯಾಸದಲ್ಲಿ ತೊಡಗುವಂತೆ ಸೂಚಿಸಲಾಯಿತು. 8 ಮತ್ತು 9 ನೆ ತರಗತಿಯ ವಿದ್ಯಾರ್ಥಿಗಳು ಬರೆದಿರುವ ಕಾಪಿ ಬರವಣಿಗೆಯನ್ನು ಪರಿಶೀಲಿಸಲಾಯಿತು. ಎಲ್ಲಾ ವಿಷಯಗಳ ಪಾಠಗಳ ಪ್ರಶ್ನೋತ್ತರಗಳನ್ನು ಬರೆಯುವಂತೆ ಸೂಚಿಸಲಾಯಿತು.

ಸಂವೇದ ತರಗತಿಗಳನ್ನು ತಪ್ಪದೆ ವೀಕ್ಷಿಸುವಂತೆ ತಿಳಿಸಲಾಯಿತು.



ವಿದ್ಯಾಗಮ -7 AK

 

ವಿದ್ಯಾಗಮ -7

ದಿನಾಂಕ 15-09-2020 ರಂದು ಶ್ರೀಮತಿ ಅಂಬುಜಾಕ್ಷಿ ಕೆ ಮತ್ತು ಶ್ರೀ ಮುರಳೀಧರ ಸರ್ ರವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ .

ಈ ದಿನ 32 ವಿದ್ಯಾರ್ಥಿಗಳಿಗೆ 31 ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಹಿತಿರುಗಿಸಿದರು ಮತ್ತು ಸಾಫಲ್ಯ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಯಿತು. 10 ನೆ ತರಗತಿಯವರಿಗೆ ಹಿಂದಿ ಶಿಕ್ಷಕರು ಪಠ್ಯದ ಒಂದು ಪದ್ಯ ಬೋಧನೆ ಮಾಡಿದರು ಹಾಗೂ ಕೆಲವೊಂದು ವ್ಯಾಕರಣಾಂಶಗಳನ್ನು ತಿಳಿಸಿಕೊಟ್ಟರು.

ಈ ದಿನ ವಿದ್ಯಾರ್ಥಿಗಳಿಂದ ಪೋಷಣ ಮಾಸಾಚರಣೆಯ ಪ್ರಯುಕ್ತ ನೀಡಲಾದ ಚಟುವಟಿಕೆ ಭಿತ್ತಿ ಪತ್ರದ ಪ್ರದರ್ಶನ ಮಾಡಲಾಯಿತು.


ವಿದ್ಯಾಗಮ – 6 AK

 

ವಿದ್ಯಾಗಮ – 6

ದಿನಾಂಕ 10-09-2020 ರಂದು ಅಂಬುಜಾಕ್ಷಿ ಕೆ ಮತ್ತು ಶ್ರೀ ಮುರಳೀಧರ ಸರ್ ಅವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ.

32 ವಿದ್ಯಾರ್ಥಿಗಳಿಗೆ 30  ವಿದ್ಯಾರ್ಥಿಗಳ ಹಾಜರಿ. ಎಲ್ಲಾ ವಿದ್ಯಾರ್ಥಿಗಳು ನೀಡಿದ್ದ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಹಿಂತಿರುಗಿಸಿದರು.




ಈ ದಿನ ಪೋಷಣಾ ಮಾಸಾಚರಣೆಯನ್ನು ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳು , ಸೊಪ್ಪು, ತರಕಾರಿಗಳು, ಹಣ್ಣುಹಂಪಲುಗಳು ಇವುಗಳಲ್ಲಿರುವ , ಇವುಗಳನ್ನು ಸೇವಿಸುವುದರಿಂದಾಗುವ ಮಹತ್ವವನ್ನು ಮನದಟ್ಟುಮಾಡಿಕೊಡಲಾಯಿತು. ಹಾಗೂ ಪೊಷಕಾಂಶಗಳ ಮಹತ್ವವನ್ನು ತಿಳಿಸುವ ಭಿತ್ತಿಪತ್ರವನ್ನು ತಯಾರಿಸುವಂತೆ ಚಟುವಟಿಕೆಯನ್ನು ನೀಡಲಾಯಿತು. 

ವಿದ್ಯಾಗಮ – 5 AK

 ವಿದ್ಯಾಗಮ – 5

ದಿನಾಂಕ : 08-09-2020 ರಂದು ಅಂಬುಜಾಕ್ಷಿ ಕೆ ಮತ್ತು ನವೀನ್ ಕುಮಾರ್ ಆರ್ ಇವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ.

32 ವಿದ್ಯಾರ್ಥಿಗಳಿಗೆ 31 ವಿದ್ಯಾರ್ಥಿಗಳು ಹಾಜರಿದ್ದು,social distance ಅನ್ನು ಕಾಪಾಡಿಕೊಂಡು ಅಪೂರ್ಣಗೊಂಡಿರುವ ಚಟುವಟಿಕೆಗಳನ್ನುಪೂರ್ಣಗೊಳಿಸಿಕೊಂಡರು. ಹಾಗೂ ಕೆಲವೊಂದು ಸಮಸ್ಯೆಗಳಿಗೆ ಶಿಕ್ಷಕರಿಂದ ಪರಿಹಾರವನ್ನು ಕಂಡುಕೊಂಡರು.

8 ಮತ್ತು 10ನೆ ತರಗತಿಯ ವಿದ್ಯಾರ್ಥಿಗಳು ಶ್ರೀ ನವೀನ್ ಸರ್ ಅವರಿಂದ ಗಣಿತದ ಅಭ್ಯಾಸ ಲೆಕ್ಕಗಳನ್ನು ಹೇಳಿಸಿಕೊಂಡರು.8ನೆ ತರಗತಿಯ ವಿದ್ಯಾರ್ಥಿಗಳಿಗೆ 7ನೆ ತರಗತಿಯ ಕೆ ಎಸ್ ಕ್ಯೂ ಎ ಎ ಸಿ ಪ್ರಶ್ನೆ ಪತ್ರಿಕೆಯನ್ನು ನೀಡಿ ಉತ್ತರಿಸುವಂತೆ ಸಲಹೆ ಹಾಗೂ ಕೆಲವೊಂದು ಸೂಚನೆಗಳನ್ನು ನೀಡಲಾಯಿತು. 8 ಮತ್ತು 10 ನೆ ತರಗತಿಯವರಿಗೆ ನೈದಾನಿಕ ಪ್ರಶ್ನೆ ಪತ್ರಿಕೆ ನೀಡಲಾಯಿತು.



ವಿದ್ಯಾಗಮ -4 AK

ವಿದ್ಯಾಗಮ -4

ಶಿಕ್ಷಕರ ಹೆಸರು: ಅಂಬುಜಾಕ್ಷಿ ಕೆ

ದಿನಾಂಕ: 3-9-2020

ಸ್ಥಳ : ಅನಗಳ್ಳಿ ಜನವಸತಿ ಪ್ರದೇಶ

ದಿನಾಂಕ 3- 9-2020 ರಂದು ಜನವಸತಿ ಪ್ರದೇಶ ಅನಗಳ್ಳಿ ಗೆ ಭೇಟಿ ನೀಡಲಾಯಿತು. 32 ವಿದ್ಯರ್ಥಿಗಳಲ್ಲಿ 31 ವಿದ್ಯಾರ್ಥಿಗಳು

ಹಾಜರಿದ್ದು, ಎಲ್ಲಾ ವಿದ್ಯಾರ್ಥಿಗಳು ಚಟಿವಟಿಕೆಗಳನ್ನು ಪೂರ್ಣಗೊಳಿಸಿ ಹಿಂತಿರುಗಿಸಿದರು. ಈ ದಿನ 3 ನೆ ಚಟುವಟಿಕೆಗಳನ್ನು ನೀಡಲಾಯಿತು. ಭಾಷಾ ವಿಷಯಗಳ ಕಾಪಿ ಬರೆದಿರುವುದನ್ನು ಪರಿಶಿಲಿಸಲಾಯಿತು. ಡಿ ಡಿ ಚಂದನದಲ್ಲಿ ಸಂವೇದ ಪಾಠ ವೀಕ್ಷಣೆಯ  ಕುರಿತು ಖಾತ್ರಿ ಪಡಿಸಿಕೊಳ್ಳಲಾಯಿತು. ಪಾಠ ವೀಕ್ಷಣೆ ಮಾಡದಿರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪಾಠ ವೀಕ್ಷಣೆ ಮಾಡುವಂತೆ ತಿಳಿಸಲಾಯಿತು 

ವಿದ್ಯಾಗಮ – 3 AK

ವಿದ್ಯಾಗಮ – 3

ಶಿಕ್ಷಕರ ಹೆಸರು: ಅಂಬುಜಾಕ್ಷಿ ಕೆ

ದಿನಾಂಕ: 27-8-2020

ಸ್ಥಳ: ಅನಗಳ್ಳಿ

ದಿನಾಂಕ 27-8-2020 ರಂದು ಭೇಟಿ ಮಾಡಿ ವಿದ್ಯಾರ್ಥಿಗಳ ಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಪರಿಶೀಲಿಸಲಾಯಿತು.

ಅಪೂರ್ಣಗೊಂಡ ಚಟುವಟಿಕೆಗಳಿಗೆ ಸಲಹೆ ಸೂಚನೆಗಳನ್ನು ನೀಡಿ ಪೂರ್ಣಗೊಳಿಸಲಾಯಿತು. ವಿದ್ಯಾರ್ಥಿಗಳ ಸಮಸ್ಯೆ ಹಾಗು ಗೊಂದಲಗಳಿಗೆ ವಿಷಯ ಶಿಕ್ಷಕರಿಗೆ ಫೋನ್ ಮಾಡುವ ಮುಖಾಂತರ ಸಮಸ್ಯೆಗಳನ್ನು ಪರಿಹರಿಸಿಕೊಂಡರು. ಅವುಗಳನ್ನು ಸಂಗ್ರಹಿಸಿಕೊಂಡು 2 ನೆ ಚಟುವಟಿಕೆಗಳನ್ನು ನೀಡಲಾಯಿತು.

ಎಲ್ಲರೂ ಭಾಷಾ ವಿಷಯದಲ್ಲಿ ಪ್ರತಿದಿನವೂ ಕಾಪಿ ಬರೆಯುವಂತೆ ತಿಳಿಸಲಾಯಿತು.




ವಿದ್ಯಾಗಮ – 2 AK

ವಿದ್ಯಾಗಮ – 2

ದಿನಾಂಕ 20-8-2020 ರಂದು ಜನವಸತಿ ಪ್ರದೇಶ ಅನಗಳ್ಳಿ ಗೆ ಭೇಟಿ ನೀಡಲಾಯಿತು. 32 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಹಾಜರಿದ್ದರು. ಈ ಹಿಂದಿನ ಭೇಟಿಯಲ್ಲಿ ತಿಳಿಸಿದ್ದಂತೆ 8, 9, 10 ನೆ ತರಗತಿಯ ವಿದ್ಯಾರ್ಥಿಗಳಿಗೆ ಆರು ವಿಷಯಗಳ ಚಟುವಟಿಕೆಗಳನ್ನು ನೀಡಲಾಯಿತು. ಚಟುವಟಿಕೆಗಳನ್ನು ಪೂರ್ಣಗೊಳಿಸಲು ಪಠ್ಯ ಪುಸ್ತಕದ ಸಹಾಯ ಮತ್ತು ಹಿರಿಯ ವಿದ್ಯಾರ್ಥಿಗಳ ಸಹಾಯವನ್ನು ಪಡೆಯುವಂತೆ ತಿಳಿಸಲಾಯಿತು. ಸಹ ಪಠ್ಯ ವಿಷಯಗಳ ಸ್ವ ಕಲಿಕೆಗೆ ಪ್ರೇರಣೆ ನೀಡಲಾಯಿತು. ಡಿ ಡಿ ಚಂದನವಾಹಿನಿಯ ಸೇತುಬಂಧ ಪಾಠಗಳನ್ನು ವೀಕ್ಷಿಸಿ ರಚಿಸಿಕೊಂಡ ನೋಟ್ ಗಳನ್ನು ಪರಿಶೀಲಿಸಲಾಯಿತು ಹಾಗೂ ಎಲ್ಲರು ಡಿ ಡಿ ಚಂದನ ವಾಹಿನಿಯನ್ನು ತಪ್ಪದೇ ವೀಕ್ಷಿಸುವಂತೆ ತಿಳಿಸಲಾಯಿತು.

ಅನಗಳ್ಳಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ 7 ನೆ ತರಗತಿಯ ವಿದ್ಯಾರ್ಥಿಗಳ ವರ್ಗಾವಣೆ ಕುರಿತು ಚರ್ಚಿಸಲಾಯಿತು.ಶಾಲೆಗೆ ದಾಖಲಾಗದ ವಿದ್ಯಾರ್ಥಿಯ ಮನೆ ಭೇಟಿ ಮಾಡಿ ನಮ್ಮ ಶಾಲೆಗೆ ದಾಖಲಾಗುವಂತೆ ಪ್ರೇರೇಪಿಸಲಾಯಿತು.

ಗೈರುಹಾಜರಾದ ವಿದ್ಯಾರ್ಥಿಯ ಮನೆ ಭೇಟಿ ಮಾಡಿ ಪೋಷಕರೊಂದಿಗೆ ಚರ್ಚಿಸಲಾಯಿತು.  


Saturday, September 19, 2020

ವಿದ್ಯಾಗಮ ಚಟುವಟಿಕೆ -8



 ದಿನಾಂಕ 18-09-2020 ಶುಕ್ರವಾರ ಜನವಸತಿ ಪ್ರದೇಶವಾದ ಕುಮಾರಬೀಡು, ಮೈಸೂರು ತಾಲ್ಲೂಕು.ಇಲ್ಲಿಗೆ  ಶ್ರೀಮತಿ ಕೆ ವಿ ಲಕ್ಷ್ಮಮ್ಮ ಸಮಾಜ ವಿಜ್ಞಾನ ಶಿಕ್ಷಕಿ ಬೆಳಿಗ್ಗೆ 10.00ಗಂಟೆಗೆ ಭೇಟಿ ಕೊಟ್ಟು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕೊಟ್ಟಿರುವ ನೈದಾನಿಕ (ಪೂರ್ವ ಪರೀಕ್ಷೆ ) ಮತ್ತು ಸಾಫಲ್ಯ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಪಡೆಯಲಾಯಿತು. 

Thursday, September 17, 2020

ವಿದ್ಯಾಗಮ 1. ಜನವಸತಿ ಪ್ರದೇಶ ಅನಗಳ್ಳಿ ವಿದ್ಯಾರ್ಥಿಗಳ ಸಮೀಕ್ಷೆ- AK

 

ಸರ್ಕಾರಿ ಪ್ರೌಢಶಾಲೆ ಬೀರಿಹುಂಡಿ , ಮೈಸೂರು ತಾಲ್ಲೂಕು, ಮೈಸೂರು

ವಿದ್ಯಾಗಮ ಅನುಷ್ಟಾನ ಕಾರ್ಯಕ್ರಮ. ಜನವಸತಿ ಪ್ರದೇಶ ಅನಗಳ್ಳಿ  ವಿದ್ಯಾರ್ಥಿಗಳ ಸಮೀಕ್ಷೆ

ಶಿಕ್ಷಕರ ಹೆಸರು: ಅಂಬುಜಾಕ್ಷಿ ಕೆ ಮತ್ತು ನವೀನ್ ಕುಮಾರ್ ಆರ್

ಭೇಟಿ ನೀಡಿದ ದಿನಾಂಕ:13-08-2020

ದಿನಾಂಕ 13-08-2020 ರಂದು ಅನಗಳ್ಳಿ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ 8, 9, 10 ನೆ ತರಗತಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಬಳಿ ಇರುವ ಮೊಬೈಲ್ ವಿಧಗಳ ಆಧಾರದಲ್ಲಿ ತರಗತಿ ಕೋಣೆ 1,2,ಮತ್ತು 3ನೇ ಕೋಣೆಗಳನ್ನಾಗಿ ವಿಂಗಡಿಸಿ,ಅವರನ್ನು ಮತ್ತೆ 5/6 ವಿದ್ಯಾರ್ಥಿಗಳ ಉಪಗುಂಪುಗಳನ್ನಾಗಿ ವಿಂಗಡಿಸಿ, ಮುಂದಿನ ದಿನಗಳಲ್ಲಿವಿದ್ಯಾಗಮ ಕಾರ್ಯಕ್ರಮಕ್ಕೆ  ಎಲ್ಲರೂ ಹಾಜರಿರುವಂತೆ ಹಾಗು ಚಟುವಟಿಕೆಗಳ ಮುಖಾಂತರ ಸ್ವಕಲಿಕೆಗೆ ಪ್ರೇರಣೆ ನೀಡಲಾಯಿತು.




Wednesday, September 16, 2020

 ವಿದ್ಯಾಗಮ-4


On 03/09/2020  I , Naveen Kumar R and  Pradeep Kumar , have visited  to the village MADAHALLI to conduct   Vidyagama Programme. On this day ,First we made them to sit in the team of  5-6 students  ,as it was decided earlier. We collected the ACTIVITY -1 which was given in the last visit. We segregated  the papers according to their class and subject .  33 students out of 36 have submitted their activities from my team .  24 students out of 28 have submitted their activities in Pradeep sir’s team .

We then distributed  Activity -2 among the students and asked them to complete with in three days . We then discussed about the SAMVEDA PROGRAMME telecasting in DD-Chandana Channel . We checked their key -points about the SAMVEDA Classes.

Instruction to the students- Pradeep Sir

You can call me any time to clarify your doubts-Naveen Kumar R

See question 04, tell me the answer- Naveen Kumar R



ವಿದ್ಯಾಗಮ -7 MNV

Click hear to view report "ವಿದ್ಯಾಗಮ-7 ಭೇಟಿ ವರದಿ "

Tuesday, September 15, 2020

ವಿದ್ಯಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಶೆಟ್ಟನಾಯಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳು

 📖



ವಿದ್ಯಾಗಮ ಚಟುವಟಿಕೆ -7KVL

 ವಿದ್ಯಾಗಮ ಚಟುವಟಿಕೆಗಳನ್ನು ಕುಮಾರಬೀಡು ವಿದ್ಯಾರ್ಥಿಗಳಿಗೆ ಕೊಟ್ಟು ಅಪೂರ್ಣಗೊಂಡ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಪಡೆಯಲಾಯಿತು. 


Saturday, September 12, 2020

SCHOOL DETAILS

Our School was Established on 1982

ವಿದ್ಯಾಗಮ – 5 MNV


ದಿನಾಂಕ : 08-09-2020  , ಸ್ಥಳ: ಕಣಿಯನ ಹುಂಡಿ, ಹೆಚ್ ಡಿ ಕೋಟೆ ತಾ||
 


ಭೇಟಿ ನೀಡಿದ ಶಿಕ್ಷಕರ ಹೆಸರು : ವಿಜಯಸಿಂಹನ್ ಎಂ ಎನ್  M.Sc,M.Ed.








ಈ ದಿನದ ಭೇಟಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿದ್ದು  ಮಳೆ ಬಂದ ಕಾರಣ ಹೊಲಗಳಿಗೆ ತರಳಿದ್ದರು. ವಿದ್ಯಾರ್ಥಿಗಳನ್ನು ಕಳುಹಿಸಿ  ಹೊಲಗಳಿಗೆ ತೆರಳಿದ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಈ ದಿನದ ಹಾಜರಾತಿ  80% ಆಗಿತ್ತು. 

10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ನೀಡಿ ಅವರುಗಳ ಸಂದೇಹಗಳನ್ನು ಕೇಳಿ ಸಮಸ್ಯೆಗಳನ್ನು ಪರಿಹರಿಸಲಾಯಿತು. ಚಟುವಟಿಕೆಗಳನ್ನು ಮಾಡುವಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು ಹಲವು ವಿಷಯಗಳ ಚಟುವಟಿಕೆಗಳನ್ನು ಮಾಡಿಕೊಳ್ಳುವಲ್ಲಿ ಸಫಲರಾದರು.


           8 ,9 ,10ನೇ ತರಗತಿ ವಿದ್ಯಾರ್ಥಿಗಳು ಮುಖ್ಯವಾಗಿ ಗಣಿತ , ವಿಜ್ಞಾನ ಮತ್ತು ಇಂಗ್ಲೀಷ್ ವಿಷಯ ಗಳಲ್ಲಿ ಚಟುವಟಿಕೆ ಮಾಡುವುದರಲ್ಲಿ ಕಷ್ಟಪಡುತ್ತಿದ್ದು ಹೆಚ್ಚಿನ ಮಾರ್ಗದರ್ಶನದ ಅವಶ್ಯವಿದ್ದದ್ದು ಕಂಡು ಬಂದಿತು. ಈ ದಿನ ತರಗತಿ  ಸ್ಥಳದಲ್ಲೇ  ಪೂರ್ಣ ಚಟುವಟಿಕೆಗಳನ್ನು ಪೂರ್ಣಗೊಳಿಕೊಳ್ಳಲು ಮಾರ್ಗದರ್ಶನ ಮಾಡಿ ,ಎಲ್ಲರೂ ಚಟುವಟಿಕೆಯನ್ನು  ಪೂರ್ಣಗೊಳಿಸುವುದರಲ್ಲಿ ಯಶಸ್ವಿಯಾದರು.


@@@@@@@@@@@