Sunday, September 20, 2020

ವಿದ್ಯಾಗಮ- 8 AK

ವಿದ್ಯಾಗಮ- 8

ದಿನಾಂಕ 18-09-2020 ರಂದು ಅನಗಳ್ಳಿ ಜನವಸತಿ ಪ್ರದೇಶದ ಭೇಟಿ. ಈದಿನ 32 ವಿದ್ಯಾರ್ಥಿಗಳಿಗೆ 29 ವಿದ್ಯಾರ್ಥಿಗಳು ಹಾಜರಿದ್ದರು. ಈ ಹಿಂದೆ ನೀಡಿದ್ದ ಎಲ್ಲಾ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಫೋನ್ ಮುಖಾಂತರ ವಿಷಯ ಶಿಕ್ಷಕರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು. 10 ನೆ ತರಗತಿಯವರು ರೂಪಣಾತ್ಮಕ 1 ರ ಪಾಠಗಳನ್ನು ಗುರುತಿಸಿಕೊಂಡು ಅಭ್ಯಾಸದಲ್ಲಿ ತೊಡಗುವಂತೆ ಸೂಚಿಸಲಾಯಿತು. 8 ಮತ್ತು 9 ನೆ ತರಗತಿಯ ವಿದ್ಯಾರ್ಥಿಗಳು ಬರೆದಿರುವ ಕಾಪಿ ಬರವಣಿಗೆಯನ್ನು ಪರಿಶೀಲಿಸಲಾಯಿತು. ಎಲ್ಲಾ ವಿಷಯಗಳ ಪಾಠಗಳ ಪ್ರಶ್ನೋತ್ತರಗಳನ್ನು ಬರೆಯುವಂತೆ ಸೂಚಿಸಲಾಯಿತು.

ಸಂವೇದ ತರಗತಿಗಳನ್ನು ತಪ್ಪದೆ ವೀಕ್ಷಿಸುವಂತೆ ತಿಳಿಸಲಾಯಿತು.



No comments:

Post a Comment