ದಿನಾಂಕ : 08-09-2020 , ಸ್ಥಳ: ಕಣಿಯನ ಹುಂಡಿ, ಹೆಚ್ ಡಿ ಕೋಟೆ ತಾ||
ಭೇಟಿ ನೀಡಿದ ಶಿಕ್ಷಕರ ಹೆಸರು : ವಿಜಯಸಿಂಹನ್ ಎಂ ಎನ್ M.Sc,M.Ed.
ಈ ದಿನದ ಭೇಟಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿದ್ದು ಮಳೆ ಬಂದ ಕಾರಣ ಹೊಲಗಳಿಗೆ ತರಳಿದ್ದರು. ವಿದ್ಯಾರ್ಥಿಗಳನ್ನು ಕಳುಹಿಸಿ ಹೊಲಗಳಿಗೆ ತೆರಳಿದ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಈ ದಿನದ ಹಾಜರಾತಿ 80% ಆಗಿತ್ತು.
10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ನೀಡಿ ಅವರುಗಳ
ಸಂದೇಹಗಳನ್ನು ಕೇಳಿ ಸಮಸ್ಯೆಗಳನ್ನು ಪರಿಹರಿಸಲಾಯಿತು. ಚಟುವಟಿಕೆಗಳನ್ನು ಮಾಡುವಲ್ಲಿ ವಿದ್ಯಾರ್ಥಿಗಳು
ಉತ್ಸಾಹದಿಂದ ಪಾಲ್ಗೊಂಡಿದ್ದು ಹಲವು ವಿಷಯಗಳ ಚಟುವಟಿಕೆಗಳನ್ನು ಮಾಡಿಕೊಳ್ಳುವಲ್ಲಿ ಸಫಲರಾದರು.
8 ,9 ,10ನೇ ತರಗತಿ
ವಿದ್ಯಾರ್ಥಿಗಳು ಮುಖ್ಯವಾಗಿ ಗಣಿತ , ವಿಜ್ಞಾನ ಮತ್ತು ಇಂಗ್ಲೀಷ್ ವಿಷಯ ಗಳಲ್ಲಿ ಚಟುವಟಿಕೆ ಮಾಡುವುದರಲ್ಲಿ
ಕಷ್ಟಪಡುತ್ತಿದ್ದು ಹೆಚ್ಚಿನ ಮಾರ್ಗದರ್ಶನದ ಅವಶ್ಯವಿದ್ದದ್ದು ಕಂಡು ಬಂದಿತು. ಈ ದಿನ ತರಗತಿ ಸ್ಥಳದಲ್ಲೇ
ಪೂರ್ಣ ಚಟುವಟಿಕೆಗಳನ್ನು ಪೂರ್ಣಗೊಳಿಕೊಳ್ಳಲು ಮಾರ್ಗದರ್ಶನ ಮಾಡಿ ,ಎಲ್ಲರೂ ಚಟುವಟಿಕೆಯನ್ನು ಪೂರ್ಣಗೊಳಿಸುವುದರಲ್ಲಿ ಯಶಸ್ವಿಯಾದರು.
@@@@@@@@@@@
No comments:
Post a Comment