Tuesday, September 22, 2020

ವಿದ್ಯಾಗಮ- ೯ AK

 ಅನಗಳ್ಳಿ ಜನವಸತಿ ಪ್ರದೇಶ

ದಿನಾಂಕ ೨೨-೦೯-೨೦೨೦ ಈ ದಿನ ೩೨ ವಿದ್ಯಾರ್ಥಿಗಳಲ್ಲಿ ೩೦ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ರೂಪಣಾತ್ಮಕ ೧ ಕ್ಕೆ ಸಂಬಂಧಿಸಿದ ಪಾಠಗಳ ಅಭ್ಯಾಸ ಪ್ರಶ್ನೆಗಳಿಗೆ ಉತ್ತರ ಬರೆದಿರುವುದನ್ನು ನೋಡಲಾಯಿತು. ಹಾಗು ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು ಸಹಾಯ ಮಾಡುವಂತೆ ಸೂಚಿಸಲಾಯುತು.

ಇಂದು ಅಪೌಷ್ಟಿಕತೆಯ ನಿವಾರಣೆ ಯಲ್ಲಿ ಸಮತೋಲನ ಆಹಾರದ ಪದಾರ್ಥಗಳ ಪಾತ್ರದ ಕುರಿತು ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

೧೦ ನೆ ತರಗತಿಯ ಮಕ್ಕಳಿಗೆ ರೂಪಣಾತ್ಮಕ ೧ ರ ಚಟುವಟಿಕೆ ಯನ್ನು ನೀಡಲಾಯಿತು. ಸಲಹೆಯನ್ನು ನೀಡಲಾಯಿತು.






Monday, September 21, 2020

ವಿದ್ಯಾಗಮ - 9 ವಿಜಯಸಿಂಹನ್ ಎಂ ಎನ್( MNV)

 ದಿನಾಂಕ 21-09-2020 ರ ವಿದ್ಯಾಗಮ ಭೇಟಿಯಲ್ಲಿ ಹೆಚ್ಚಿನ ಕಾರ್ಯ ಚಟುಚಟಿಕೆಗಳು ನಡೆದಿರುತ್ತದೆ. ಈ ದಿನ ಒಂದು ಪ್ರಬಂಧ ಸ್ಪರ್ಧೆ ಮತ್ತು ಪೋಷಕ ಅಭಿಯಾನದ ಪ್ರಯುಕ್ತ ಭಿತ್ತಿಚಿತ್ರ ಅನಾವರಣ ಮತ್ತು ವಿದ್ಯಾರ್ಥಿಗಳಿಂದ ಭಾಷಣ ಏರ್ಪಡಿಸಲಾಗಿತ್ತು . ವಿವರವಾದ ವರದಿಗಾಗಿ ಇಲ್ಲಿ click ಮಾಡಿ ವಿದ್ಯಾಗಮ ವರದಿ-9

ವಿದ್ಯಾಗಮ - 8 MNV

 ದಿನಾಂಕ 18-09-2020 ರಂದು ವಿದ್ಯಾಗಮ ಭೇಟಿ ವಿವರವಾದ ವರದಿಗಾಗಿ click hear ವಿದ್ಯಾಗಮ -8 ವರದಿ

Sunday, September 20, 2020

ವಿದ್ಯಾಗಮ- 8 AK

ವಿದ್ಯಾಗಮ- 8

ದಿನಾಂಕ 18-09-2020 ರಂದು ಅನಗಳ್ಳಿ ಜನವಸತಿ ಪ್ರದೇಶದ ಭೇಟಿ. ಈದಿನ 32 ವಿದ್ಯಾರ್ಥಿಗಳಿಗೆ 29 ವಿದ್ಯಾರ್ಥಿಗಳು ಹಾಜರಿದ್ದರು. ಈ ಹಿಂದೆ ನೀಡಿದ್ದ ಎಲ್ಲಾ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಫೋನ್ ಮುಖಾಂತರ ವಿಷಯ ಶಿಕ್ಷಕರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು. 10 ನೆ ತರಗತಿಯವರು ರೂಪಣಾತ್ಮಕ 1 ರ ಪಾಠಗಳನ್ನು ಗುರುತಿಸಿಕೊಂಡು ಅಭ್ಯಾಸದಲ್ಲಿ ತೊಡಗುವಂತೆ ಸೂಚಿಸಲಾಯಿತು. 8 ಮತ್ತು 9 ನೆ ತರಗತಿಯ ವಿದ್ಯಾರ್ಥಿಗಳು ಬರೆದಿರುವ ಕಾಪಿ ಬರವಣಿಗೆಯನ್ನು ಪರಿಶೀಲಿಸಲಾಯಿತು. ಎಲ್ಲಾ ವಿಷಯಗಳ ಪಾಠಗಳ ಪ್ರಶ್ನೋತ್ತರಗಳನ್ನು ಬರೆಯುವಂತೆ ಸೂಚಿಸಲಾಯಿತು.

ಸಂವೇದ ತರಗತಿಗಳನ್ನು ತಪ್ಪದೆ ವೀಕ್ಷಿಸುವಂತೆ ತಿಳಿಸಲಾಯಿತು.



ವಿದ್ಯಾಗಮ -7 AK

 

ವಿದ್ಯಾಗಮ -7

ದಿನಾಂಕ 15-09-2020 ರಂದು ಶ್ರೀಮತಿ ಅಂಬುಜಾಕ್ಷಿ ಕೆ ಮತ್ತು ಶ್ರೀ ಮುರಳೀಧರ ಸರ್ ರವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ .

ಈ ದಿನ 32 ವಿದ್ಯಾರ್ಥಿಗಳಿಗೆ 31 ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಹಿತಿರುಗಿಸಿದರು ಮತ್ತು ಸಾಫಲ್ಯ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಯಿತು. 10 ನೆ ತರಗತಿಯವರಿಗೆ ಹಿಂದಿ ಶಿಕ್ಷಕರು ಪಠ್ಯದ ಒಂದು ಪದ್ಯ ಬೋಧನೆ ಮಾಡಿದರು ಹಾಗೂ ಕೆಲವೊಂದು ವ್ಯಾಕರಣಾಂಶಗಳನ್ನು ತಿಳಿಸಿಕೊಟ್ಟರು.

ಈ ದಿನ ವಿದ್ಯಾರ್ಥಿಗಳಿಂದ ಪೋಷಣ ಮಾಸಾಚರಣೆಯ ಪ್ರಯುಕ್ತ ನೀಡಲಾದ ಚಟುವಟಿಕೆ ಭಿತ್ತಿ ಪತ್ರದ ಪ್ರದರ್ಶನ ಮಾಡಲಾಯಿತು.


ವಿದ್ಯಾಗಮ – 6 AK

 

ವಿದ್ಯಾಗಮ – 6

ದಿನಾಂಕ 10-09-2020 ರಂದು ಅಂಬುಜಾಕ್ಷಿ ಕೆ ಮತ್ತು ಶ್ರೀ ಮುರಳೀಧರ ಸರ್ ಅವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ.

32 ವಿದ್ಯಾರ್ಥಿಗಳಿಗೆ 30  ವಿದ್ಯಾರ್ಥಿಗಳ ಹಾಜರಿ. ಎಲ್ಲಾ ವಿದ್ಯಾರ್ಥಿಗಳು ನೀಡಿದ್ದ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಹಿಂತಿರುಗಿಸಿದರು.




ಈ ದಿನ ಪೋಷಣಾ ಮಾಸಾಚರಣೆಯನ್ನು ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳು , ಸೊಪ್ಪು, ತರಕಾರಿಗಳು, ಹಣ್ಣುಹಂಪಲುಗಳು ಇವುಗಳಲ್ಲಿರುವ , ಇವುಗಳನ್ನು ಸೇವಿಸುವುದರಿಂದಾಗುವ ಮಹತ್ವವನ್ನು ಮನದಟ್ಟುಮಾಡಿಕೊಡಲಾಯಿತು. ಹಾಗೂ ಪೊಷಕಾಂಶಗಳ ಮಹತ್ವವನ್ನು ತಿಳಿಸುವ ಭಿತ್ತಿಪತ್ರವನ್ನು ತಯಾರಿಸುವಂತೆ ಚಟುವಟಿಕೆಯನ್ನು ನೀಡಲಾಯಿತು. 

ವಿದ್ಯಾಗಮ – 5 AK

 ವಿದ್ಯಾಗಮ – 5

ದಿನಾಂಕ : 08-09-2020 ರಂದು ಅಂಬುಜಾಕ್ಷಿ ಕೆ ಮತ್ತು ನವೀನ್ ಕುಮಾರ್ ಆರ್ ಇವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ.

32 ವಿದ್ಯಾರ್ಥಿಗಳಿಗೆ 31 ವಿದ್ಯಾರ್ಥಿಗಳು ಹಾಜರಿದ್ದು,social distance ಅನ್ನು ಕಾಪಾಡಿಕೊಂಡು ಅಪೂರ್ಣಗೊಂಡಿರುವ ಚಟುವಟಿಕೆಗಳನ್ನುಪೂರ್ಣಗೊಳಿಸಿಕೊಂಡರು. ಹಾಗೂ ಕೆಲವೊಂದು ಸಮಸ್ಯೆಗಳಿಗೆ ಶಿಕ್ಷಕರಿಂದ ಪರಿಹಾರವನ್ನು ಕಂಡುಕೊಂಡರು.

8 ಮತ್ತು 10ನೆ ತರಗತಿಯ ವಿದ್ಯಾರ್ಥಿಗಳು ಶ್ರೀ ನವೀನ್ ಸರ್ ಅವರಿಂದ ಗಣಿತದ ಅಭ್ಯಾಸ ಲೆಕ್ಕಗಳನ್ನು ಹೇಳಿಸಿಕೊಂಡರು.8ನೆ ತರಗತಿಯ ವಿದ್ಯಾರ್ಥಿಗಳಿಗೆ 7ನೆ ತರಗತಿಯ ಕೆ ಎಸ್ ಕ್ಯೂ ಎ ಎ ಸಿ ಪ್ರಶ್ನೆ ಪತ್ರಿಕೆಯನ್ನು ನೀಡಿ ಉತ್ತರಿಸುವಂತೆ ಸಲಹೆ ಹಾಗೂ ಕೆಲವೊಂದು ಸೂಚನೆಗಳನ್ನು ನೀಡಲಾಯಿತು. 8 ಮತ್ತು 10 ನೆ ತರಗತಿಯವರಿಗೆ ನೈದಾನಿಕ ಪ್ರಶ್ನೆ ಪತ್ರಿಕೆ ನೀಡಲಾಯಿತು.